Bookmark and Share

ಕಾಡ ಹಾಡು

ಹಕ್ಕಿ ಇಲ್ಲ
ಪುಕ್ಕ ಇಲ್ಲ
ಬಣ್ಣ ಬಣ್ಣದ
ಚಿಟ್ಟೆ ಇಲ್ಲ

ಜಿಂಕೆ ಮೇಯೋ
ಹುಲ್ಲೂ ಇಲ್ಲ
ಜಿಂಕೆ ಇಲ್ಲ
ಜಿಗಿತ ಇಲ್ಲ

ಹಾವೂ ಇಲ್ಲ
ಹುಲಿಯೂ ಇಲ್ಲ
ನೀರೂ ಇಲ್ಲ
ನದಿಯು ಇಲ್ಲ

ಇರುವ ಕಾಡನ್ನುಳಿಸದಿದ್ದರೆ
ನಾನೂ ಇಲ್ಲ
ನೀನೂ ಇಲ್ಲ

Kaada Hadu.

Hakki illa
Pukka illa
Banna Bannada
Chitte illa

Jinke meyo
Hullu illa
Jinke illa
Jigita illa

Haavu illa
Huliyu illa
Neeru illa
Nadiyu illa

Iruva Kaadann-Ulisadiddare
Naanu illa
Neenu illa.


ಚಿಟ್ಟೆಯ ಕಥೆ

ಬಣ್ಣ ಬಣ್ಣದ ಚಿಟ್ಟೆ
ಸೊಗಸಾದ ಚಿಟ್ಟೆ
ಹೂವಿಂದ ಹೂವಿಗೆ
ಹಾರುವ ಚಿಟ್ಟೆ

ಕಾಮನಾ ಬಿಲ್ಲನ್ನು
ತಾಕಿ ಬಂದೆಯ ನೀನು
ಎಲ್ಲಿಂದ ಬಂದಿರುವೆ
ಹೇಳೆಯಾ ಚಿಟ್ಟೆ

ನನಗೇನು ಗೊತ್ತಿಲ್ಲ
ನಾನೇನು ಕಾಣೆ

ಸಣ್ಣ ಮೊಟ್ಟೆ  ಒಡೆದು
ಪುಟ್ಟ ಹುಳುವಾಗಿ
ಗಿಡದಲ್ಲಿ ಎಲೆ ತಿಂದು
ಮಲಗಿಬಿಟ್ಟಿದ್ದೆ

ಎದ್ದು ಕಂಡರೆ ಸುತ್ತ
ಚೀಲ ಒಂದಿತ್ತು
ಒದರಿ ಬಂದೆ
ನಾನು ಚಿಟ್ಟೆಯಾಗಿದ್ದೆ

Chitteya Kathe.

Banna bannada chitte
Sogasaada chitte
Huvvinda huvvige
Haaruva chitte

Kaamana billannu
Taaki bandeya neenu
Yellinda bandiruve
Heleya chitte?

Nanagenu gottilla
Naanenu kane

Sanna motte odedu
Putta huluvagi
Gidadalli yele tindu
Malagi bittidde

Yeddu kandare sutta
Cheela ondittu
Odari bande
Naanu Chitteyagidde.